ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (CET 2023) ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಇಂದಿನಿಂದ ಕೆಸಿಇಟಿ ಪರೀಕ್ಷೆಗೆ ಆನ್‌ಲೈನ್ ನೊಂದಣಿ ಪ್ರಕ್ರಿಯೆ ಆರಂಭವಾಗಲಿದೆ.
![]() |
KCET EXAM DATE RELEASED |
![]() |
KCET 2023 |
ಅರ್ಜಿ ಸಲ್ಲಿಕೆಗೆ ಇಂಪಾರ್ಟೆಂಟ್ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ : ಮಾರ್ಚ್ 02,2023 ಇಂದಿನಿಂದ ಆರಂಭ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ : ಏಪ್ರಿಲ್ 05,2023 ಮುಕ್ತಾಯ ದಿನಾಂಕ.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಏಪ್ರಿಲ್ 07,2023
ಅರ್ಜಿ ಸಲ್ಲಿಸುವುದು ಹೇಗೆ? :
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಹೋಂ ಪೇಜ್‌ನಲ್ಲಿ 'KCET Online Registration Link' ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, ನೊಂದಣಿ ಮಾಡಿಕೊಳ್ಳಿ.
ಸಾಮಾನ್ಯ ಪ್ರವೇಶ ಪರೀಕ್ಷೆ-2023ರ ವೇಳಾಪಟ್ಟಿ :
- 20-05-2023 - ಶನಿವಾರ - ಬೆಳಗ್ಗೆ 10.30 ರಿಂದ 11.50ರವರೆಗೆ - ಜೀವಶಾಸ್ತ್ರ
- ಮಧ್ಯಾಹ್ನ 2.30 ರಿಂದ 3.50ರವರೆಗೆ- ಗಣಿತ ಶಾಸ್ತ್ರ
- 21-05-2023 - ಬೆಳಗ್ಗೆ 10.30 ರಿಂದ 11.50ರವರೆಗೆ - ಭೌತಶಾಸ್ತ್ರ.
- ಮಧ್ಯಾಹ್ನ 2.30 ರಿಂದ 3.50ರವರೆಗೆ- ರಸಾಯನಶಾಸ್ತ್ರ.
![]() |
KCET TIME TABLE 2023 |
ಕನ್ನಡ ಭಾಷಾ ಪರೀಕ್ಷೆ :
ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.
22-05-2023 - ಬೆಳಗ್ಗೆ 11.30 ರಿಂದ 12.30ರವರೆಗೆ - ಹೊರನಾಡು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ನಡೆಸಲಾಗುವುದು.
ಈ ಪರೀಕ್ಷೆಯು ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನಡೆಯುತ್ತದೆ.
ಸುಮಾರು 198 ಕಾಲೇಜುಗಳು ಕೆ-ಸೆಟ್ ಅಂಕಗಳನ್ನು ಪರಿಗಣಿಸುತ್ತವೆ. ಕೆ-ಸೆಟ್ 2023 ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಕಡ್ಡಾಯ ವಿಷಯಗಳೊಂದಿಗೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಕೆ-ಸೆಟ್ 2023 ಅರ್ಜಿ ಶುಲ್ಕ 500 ರೂಪಾಯಿ- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ.
2023 ರಲ್ಲಿ, 2.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ನಿರೀಕ್ಷೆಯಿದೆ.